ಕೊಲೆಸ್ಟ್ರಾಲ್ ಮತ್ತು ಹೃದಯದ ಆರೋಗ್ಯ

ಕೊಲೆಸ್ಟ್ರಾಲ್ ಎಂದರೇನು? ಗುಡ್ ಮತ್ತು ಬ್ಯಾಡ್ ಕೊಲೆಸ್ಟ್ರಾಲ್ ವ್ಯತ್ಯಾಸ ಹಾಗೂ ಅದನ್ನು ನಿಯಂತ್ರಿಸುವ ಸರಳ ಮಾರ್ಗಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
"ಹೃದಯಾಘಾತ ತಡೆಯಲು ಕೊಲೆಸ್ಟ್ರಾಲ್ ನಿಯಂತ್ರಣ ಮತ್ತು ಹೃದಯದ ಆರೋಗ್ಯದ ಸಂಪೂರ್ಣ ಮಾಹಿತಿ"


ನೋಡಿ ರೀ, ಸಾಮಾನ್ಯವಾಗಿ ನಾವು 'ಕೊಲೆಸ್ಟ್ರಾಲ್' ಅಂತ ಕೇಳಿದ ತಕ್ಷಣ ಅಯ್ಯೋ ಇದೇನೋ ದೊಡ್ಡ ಕಾಯಿಲೆ, ಇದು ನಮ್ಮ ಪ್ರಾಣ ತೆಗೆಯುತ್ತೆ ಅಂತ ಗಾಬರಿ ಆಗ್ತೀವಿ ಅಲ್ವಾ? ಆದ್ರೆ ಒಂದು ಮಾತು ನೆನಪಿಡಿ, ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೂ ಈ ಕೊಲೆಸ್ಟ್ರಾಲ್ ಅನ್ನೋದು ಅತೀ ಅಗತ್ಯ. ನಮ್ಮ ಟ್ರಿಲಿಯನ್ ಗಟ್ಟಲೆ ಜೀವಕೋಶಗಳ ಕೋಶಪೊರೆ (Cell Membrane) ಚೆನ್ನಾಗಿರಬೇಕಂದ್ರೆ ಈ ಮೇಣದಂತಹ ವಸ್ತು ಇರಲೇಬೇಕು. ಆದ್ರೆ ಇದು ಮಿತಿ ಮೀರಿದ್ರೆ ಮಾತ್ರ ನಮ್ಮನ್ನ 'ಕೊಲೆ' ಮಾಡೋ ಹಂತಕ್ಕೆ ಹೋಗುತ್ತೆ.

ಏನಿದು ಗುಡ್ ಮತ್ತು ಬ್ಯಾಡ್ ಕೊಲೆಸ್ಟ್ರಾಲ್ ಕಥೆ?

ಡಾಕ್ಟರ್ ಹತ್ತಿರ ಹೋದಾಗ ಅವರು HDL ಮತ್ತು LDL ಅಂತ ಹೇಳ್ತಿರ್ತಾರೆ ಅಲ್ವಾ? ಸುಲಭವಾಗಿ ಹೇಳ್ಬೇಕು ಅಂದ್ರೆ, HDL ಅನ್ನೋದು ನಮ್ಮ ಪಾಲಿನ 'ಹೀರೋ' ಅಥವಾ ಗುಡ್ ಕೊಲೆಸ್ಟ್ರಾಲ್. ಇದು ರಕ್ತದಲ್ಲಿರೋ ಬೇಡದ ಕೊಲೆಸ್ಟ್ರಾಲ್ನ್ನೆಲ್ಲಾ ಎತ್ತಿಕೊಂಡು ಹೋಗಿ ಲಿವರ್‌ಗೆ ಒಪ್ಪಿಸುತ್ತೆ, ಅಲ್ಲಿಂದ ಅದು ದೇಹದಿಂದ ಹೊರಗೆ ಹೋಗುತ್ತೆ.

ಇನ್ನು ಈ LDL ಇದೆಯಲ್ಲ, ಇದು ನಿಜವಾದ 'ವಿಲನ್'. ಇದು ನಮ್ಮ ರಕ್ತನಾಳಗಳ ಗೋಡೆಗಳಿಗೆ ಅಂಟಿಕೊಂಡು 'ಪ್ಲಾಕ್' ಅಂದ್ರೆ ಒಂದು ರೀತಿಯ ಕಸದ ರಾಶಿಯನ್ನ ಸೃಷ್ಟಿ ಮಾಡುತ್ತೆ. ಇದು ಜಾಸ್ತಿ ಆದಂತೆ ರಕ್ತ ಸಂಚಾರಕ್ಕೆ ಜಾಗ ಇರೋದಿಲ್ಲ. ಆವಾಗಲೇ ಹಾರ್ಟ್ ಅಟ್ಯಾಕ್ ಅಥವಾ ಸ್ಟ್ರೋಕ್ ಆಗೋದು.

ಯಾವಾಗ ಅಪಾಯದ ಗಂಟೆ ಬಾರಿಸುತ್ತೆ?

ನಿಮಗೆ ಆಗಾಗ ಎದೆ ಉರಿ ಬರ್ತಾ ಇದೆಯಾ? ಅಥವಾ ಸ್ವಲ್ಪ ನಡೆದರೂ ಎದೆ ಭಾರ ಅನಿಸ್ತಾ ಇದೆಯಾ? ಹಾಗಿದ್ರೆ ಸ್ವಲ್ಪ ಎಚ್ಚರ ವಹಿಸಿ. ಕಣ್ಣಿನ ಬಿಳಿ ಭಾಗದ ಸುತ್ತ ಹಳದಿ ಬಣ್ಣ ಕಾಣಿಸಿಕೊಳ್ಳೋದು, ಕೈ ಕಾಲುಗಳು ಪದೇ ಪದೇ ಮರಗಟ್ಟೋದು ಇವೆಲ್ಲಾ ಕೊಲೆಸ್ಟ್ರಾಲ್ ಏರಿಕೆ ಆಗಿರೋ ಲಕ್ಷಣಗಳು. ಒಂದು ಸಿಂಪಲ್ ಬ್ಲಡ್ ಟೆಸ್ಟ್ ಮಾಡಿಸಿದ್ರೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಎಷ್ಟಿದೆ ಅಂತ ಗೊತ್ತಾಗಿಬಿಡುತ್ತೆ.

  • ವಯಸ್ಕರಲ್ಲಿ: 200 mg ಗಿಂತ ಕಡಿಮೆ ಇರಬೇಕು.
  • ಮಕ್ಕಳಲ್ಲಿ: 170 mg ಗಿಂತ ಕಡಿಮೆ ಇರಬೇಕು.

ಕಂಟ್ರೋಲ್ ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್

ನೋಡಿ ಫ್ರೆಂಡ್ಸ್, ನಾವು ತಿನ್ನೋ ಆ ಬೋಂಡಾ, ಬಜ್ಜಿ, ಡೀಪ್ ಫ್ರೈ ಮಾಡಿದ ಚಿಕನ್ ಐಟಂಗಳು ನಾಲಿಗೆಗೆ ರುಚಿ ಕೊಡಬಹುದು, ಆದ್ರೆ ಹಾರ್ಟ್‌ಗೆ ಮಾತ್ರ ಕಹಿ. ಆದಷ್ಟು ಇವುಗಳನ್ನ ಕಡಿಮೆ ಮಾಡಿ.

1. ನಾರಿನಂಶ ಹೆಚ್ಚಿರಲಿ: ದಿನಕ್ಕೆ ಅಟ್ಲೀಸ್ಟ್ 10 ಗ್ರಾಂ ಕರಗುವ ಫೈಬರ್ ಸೇವಿಸಿದ್ರೆ ಕೆಟ್ಟ ಕೊಲೆಸ್ಟ್ರಾಲ್ 5% ಕಡಿಮೆ ಆಗುತ್ತೆ. ಓಟ್ಸ್, ಹಣ್ಣು-ತರಕಾರಿ ಹೆಚ್ಚಾಗಿ ಬಳಸಿ.

2. ನಶೆಯಿಂದ ದೂರವಿರಿ: ಆ 'ನಶೆ' ಬರಿಸೋ ಎಣ್ಣೆ (ಮದ್ಯಪಾನ) ಮತ್ತು ಧೂಮಪಾನದಿಂದ ದೂರ ಇರಿ. ಇವು ನಿಮ್ಮ ಗುಡ್ ಕೊಲೆಸ್ಟ್ರಾಲ್ ಅನ್ನು ಪಟಾಪಟ್ ಅಂತ ಕಡಿಮೆ ಮಾಡಿಬಿಡುತ್ತವೆ.

3. ದೈಹಿಕ ಕಸರತ್ತು: ದಿನಕ್ಕೆ ಕನಿಷ್ಠ 30 ನಿಮಿಷ ವಾಕಿಂಗ್, ಯೋಗ ಅಥವಾ ಜಿಮ್ ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಎತ್ತರಕ್ಕೆ ತಕ್ಕ ತೂಕ ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ಯಾವುದೇ ಹೊಸ ಡಯಟ್ ಶುರು ಮಾಡುವ ಮುನ್ನ ಒಮ್ಮೆ ನಿಮ್ಮ ಫ್ಯಾಮಿಲಿ ಡಾಕ್ಟರ್ ಸಲಹೆ ಪಡೆಯೋದನ್ನ ಮರೆಯಬೇಡಿ. ಆರೋಗ್ಯವೇ ಭಾಗ್ಯ ಅಲ್ವಾ?